ದಿನದ ಅಪರಾಧಗಳ ಪಕ್ಷಿ ನೋಟ 19 ನೇ ಆಗಸ್ಟ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:18.08.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:19.08.2015 ರ ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :ಇಲ್ಲ

-ಸಾಮಾನ್ಯ ಕಳುವು :ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ,  ದಿನಾಂಕ: 18.08.2015 ರಂದು ದೂರುದಾರರಾದ ಶ್ರೀಮತಿ ಶೋಬಾಬಾಯಿ, ಮುತ್ತೂತ್‌ ಫೈನಾನ್ಸ್‌  ಸಂಸ್ಥೆ, ಬೇತಮಂಗಲ ರವರು ನೀಡಿದ ದೂರಿನಲ್ಲಿ   ದಿನಾಂಕ.28.08.2013 ರಂದು  ಬೇತಮಂಗಲದಲ್ಲಿರುವ ದೂರುದಾಠರ  ಮುತ್ತುಟ್ ಫನಾನ್ಸ್ ಲಿ.ರಲ್ಲಿಗೆ ಆರೋಪಿ ವೆಂಕಟರಾಮಪ್ಪ  ಊರಿಕುಂಟೆ ಗ್ರಾಮದವರು,  ಟ್ರ್ಯಾಕ್ಟರ್ ತೆಗೆದುಕೊಳ್ಳುವ ಸಲುವಾಗಿ ತನ್ನ ಬಳಿ ಇದ್ದ ಸುಮಾರು 100.6 ಗ್ರಾಂ ತೂಕವುಳ್ಳ ಚಿನ್ನದ ಒಡವೆಗಳನ್ನು ತನ್ನದೆಂದು ಹೇಳಿ ದೂರುದಾರರನ್ನು ನಂಬಿಸಿ ಒಡವೆಗಳನ್ನು ಮುತ್ತುಟ್ ಫನಾನ್ಸ್ ಲಿ, ನಲ್ಲಿ  ಅಡವಿಟ್ಟು 1,96,000 ರೂ. ನಗದು ಹಣವನ್ನು ಪಡೆದಿರುತ್ತಾರೆ. ದಿನಾಂಕ. 03.12.2013 ರಂದು ಅಮೃತಹಳ್ಳಿ ಪೊಲೀಸರು ದೂರುದಾರರ ಮುತ್ತುಟ್ ಫನಾನ್ಸ್ ಆಗಮಿಸಿ ಆರೋಪಿ ವೆಂಕಟರಾಮಪ್ಪ ಇಟ್ಟಿರುವ ಒಡವೆಗಳು  ಕಳ್ಳತನದ ಮಾಲಾಗಿದ್ದು  ತಿಳಿಸಿ ಈ ಸಂಬಂಧವಾಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಸಂ.554/2013 ರಂತೆ ಕೇಸು ದಾಖಲಿಸಿರುತ್ತೆ ಸದರಿ ಒಡವೆಗಳನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದು ಅಮಾನತ್ತುಪಡಿಸಿ ತೆಗೆದುಕೊಂಡು ಹೋಗಿರುತ್ತಾರೆ. ಆರೋಪಿ ವೆಂಕಟರಾಮಪ್ಪನು ಉದ್ದೇಶಪೂರ್ವಕವಾಗಿ ಮೋಸ ಮಾಡಿರುತ್ತಾರೆ .

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ :01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಕನ್ಯಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.08.2015 ರಂದು ದೂರುದಾರರಾದ ಶ್ರೀಮತಿ ವೆಂಕಟೇಶಮ್ಮ ಕೋಂ. ಮುನಿಸ್ವಾಮಿ,  ಹುಣಸನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ   ದಿನಾಂಕ:15.08.2015 ರಂದು ರಾತ್ರಿ 9-00 ಗಂಟೆಯಲ್ಲಿ ಪಿರ್ಯಾದಿ ,ಮನೆಯಲ್ಲಿ ಊಟ ಮಾಡಿ, ತನ್ನ ಮೊಮ್ಮಗಳೊಂದಿಗೆ ಟಿವಿ ನೋಡುತ್ತಿರುವಾಗ ಆರೋಪಿ ಆಶ್ವಥ್‌ ಹುಣಸನಹಳ್ಳಿ ಗ್ರಾಮದವರು ದೂರುದಾರರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲನ್ನು ಮುಚ್ಚಿ ಬೋಲ್ಟ್ ನ್ನು ಹಾಕಿ ಏಕಾಏಕಿ ಪಿರ್ಯಾದಿಯ ಮೇಲೆ ಬಿದ್ದು ಆಕೆಯ ತುಟಿಯನ್ನು ಕಚ್ಚಿ, ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಪಿರ್ಯಾದಿ ಕಿರುಚಿಕೊಂಡು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ನೀನು ಕಿರುಚಿಕೊಂಡರೆ ನಿನ್ನನ್ನು ಮುಗಿಸಿ ಬೀಡುತ್ತೇನೆ, ಎಂದು ಕೆಟ್ಟ ಮಾತುಗಳಿಂದ ಬೈದು ಆಕೆಯನ್ನು ಹಿಡಿದು ಎಳದಾಡುತ್ತಿರುವಾಗ ತನ್ನ ಮಗ ಬಾಗಿಲನ್ನು ಒದ್ದು ಮನೆಯೊಳಗೆ  ಹೋದಾಗ ಆರೋಪಿ  ಮನೆಯಿಂದ ಓಡಿ ಹೋಗಿರುತ್ತಾನೆ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಇತರ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 18.08.2015 ರಂದು ರಾತ್ರಿ 7.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ  ರವರು ಬಂಗಾರಪೇಟೆಯ ಜೆ.ಎಂ.ಎಫ್.ಸಿ ಮತ್ತು ಜೂನಿಯರ್ ಸಿವಿಲ್ ಜಡ್ಜ್  ಅಂಡ್ ಪ್ರಿನ್ಸಿಪಲ್ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಪಿ.ಸಿ.ಆರ್ ನಂ 103/2015 ರ ದೂರನ್ನು  ತಂದು ಹಾಜರುಪಡಿಸಿದ್ದೇನೆಂದರೆ  ದೂರುದಾರರಾದ ಶ್ರೀ. ಕೃಷ್ಣೇಗೌಡ ರವರು 5-10 ಹೈಬ್ರಿಡ್ ತಳಿಯ ಹಸುಗಳನ್ನು ಇಟ್ಟುಕೊಂಡಿದ್ದು ಪ್ರತಿದಿನ 40 ರಿಂದ 45 ಲೀಟರ್ ಹಾಲನ್ನು ಸದರಿ ಹಸುಗಳಿಂದ ಪಡೆಯುತ್ತಿರುತ್ತಾನೆ. ಕೆ.ಎಂ.ಎಫ್ ಅಡಿಯಲ್ಲಿ ಮಲ್ಯಂಗುರ್ಕಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿತವಾಗಿದ್ದು, ಸದರಿ ಸಂಘವು ಕೋಲಾರ ಜಿಲ್ಲಾ ಸಹಕಾರ ಸಂಘಗಳ ಅಧಿಕಾರಿಯ ಬಳಿ ನೋಂದಣಿಯಾಗಿರುತ್ತೆ, ಸದರಿ ಹಾಲು ಉತ್ಪಾದಕರ ಸಹಕಾರ ಸಂಘ 20 ರಿಂದ 25 ವರ್ಷಗಳಿಂದ ನಡೆಯುತ್ತಿದ್ದು, ಆರೋಪಿಗಳಾದ  ನರಸಿಂಹರೆಡ್ಡಿ,  ಚಂಪಕ್‌ಕಾರ್ತಿಕ್‌  ಮಂಜುನಾಥ, ರಾಮಚಂದ್ರಪ್ಪ, ನಂಜುಂಡಪ್ಪ, ಉದಯಕುಮಾರ್‌, ಕುಮಾರ್‌, ಸೋಣ್ಣಮ್ಮ, ಶಾಂತಮ್ಮ, ಕೆಂಪಣ್ಣ, ಶ್ರೀರಾಮ  ರವರುಗಳು ಸಂಘದ ಹೆಸರನ್ನು ಪ್ರದರ್ಶಿಸದೆ, ಸಂಘದ ಕಟ್ಟಡಕ್ಕೆ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಒದಗಿಸಿರುವುದಿಲ್ಲ, ಪಿರ್ಯಾದಿದಾರ ಸದರಿ ಸಂಘ ಸ್ಥಾಪಿಸಲ್ಪಟ್ಟಾಗಿನಿಂದ ಷೇರುದಾರ, ಸದಸ್ಯ ಹಾಗೂ ಗ್ರಾಹಕನಾಗಿರುತ್ತಾನೆ, ಸದರಿ ಸಂಘಕ್ಕೆ ಆರೋಪಿ1 ಕಳೆದ 20 ವರ್ಷಗಳಿಂದ ಅಧ್ಯಕ್ಷನಾಗಿದ್ದು, ಆರೋಪಿ 2 ಕಾರ್ಯದರ್ಶಿಯಾಗಿರುತ್ತಾನೆ. ಅಧ್ಯಕ್ಷರು ಮತ್ತು ಕಾರ್ಯದರ್ಶಿ ರವರು ಅಣ್ಣತಮ್ಮಂದಿರಾಗಿರುತ್ತಾರೆ. ಆರೋಪಿ 3 ರಿಂದ 11 ರವರೆಗಿನ ಆರೋಪಿಗಳು ಸಂಘದ ನಿರ್ದೇಶಕರಾಗಿರುತ್ತಾರೆ. ಆರೋಪಿ 1 ರವರು ಹಸುಗಳನ್ನು ಹೊಂದಿರುವುದಿಲ್ಲ, ಸಂಘಕ್ಕೆ ಹಾಲನ್ನು ಸಹ ಹಾಕುತ್ತಿಲ್ಲ, ಆರೋಪಿ 1 ಸದರಿ ಸಂಘಕ್ಕೆ ಚುನಾಯಿತನಾಗಿರುವುದಿಲ್ಲ, ಈತ ಅಕ್ರಮವಾಗಿ ಅಧ್ಯಕ್ಷತೆಯನ್ನು ಹೊಂದಿರುತ್ತಾನೆ. ಕಳೆದ 20 ವರ್ಷಗಳಿಂದ ಸಂಘಕ್ಕೆ ಚುನಾವಣೆ ನಡೆಸದೆ ಸಂಘದ ಕಟ್ಟಳೆಯ ಪ್ರಕಾರ ಅಧಿಕೃತ ಸದಸ್ಯರನ್ನು ಹೊಂದಿರುವುದಿಲ್ಲ, ಹಾಗೂ ಆರೋಪಿ 1 ರಿಂದ 11 ರವರು ಅಕ್ರಮವಾಗಿ  ನೇಮಕವಾಗಿ ಸಂಘದ ಕಟ್ಟಳೆಯ(Bye-Laws)  ಪ್ರಕ್ರಿಯೆಗಳನ್ನು, ಮಾರ್ಗದರ್ಶನಗಳನ್ನು ನೀತಿ-ನಿಯಮಗಳನ್ನು ಪಾಲಿಸಿರುವುದಿಲ್ಲ, ಕಳೆದ 20 ರಿಂದ 25 ವರ್ಷಗಳಿಂದ ಆರೋಪಿ 1 ಮತ್ತು 2 ರವರು ಸರಿಯಾದ ಲೆಕ್ಕ ಪತ್ರಗಳನ್ನು ಇಟ್ಟಿರುವುದಿಲ್ಲ, ಹಾಗೂ ಸಂಘದ ವಾರ್ಷಿಕ ಲೆಕ್ಕಪರಿಶೋದನೆಯನ್ನು ಮಾಡಿಸದೆ, ವಾರ್ಷಿಕ ಲಾಭ ನಷ್ಟಗಳನ್ನು ತೋರಿಸಿರುವುದಿಲ್ಲ, ಸದಸ್ಯರು ಅವರ ಕರ್ತವ್ಯಗಳನ್ನು ಸರಿಯಾಗಿ ಮಾಡದೆ ಕರ್ತವ್ಯ ಲೋಪವೆಸಗಿ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡು ವಂಚಿಸಿರುತ್ತಾರೆ. ಈ ವಿಚಾರವನ್ನು ಕೇಳಿದಕ್ಕೆ ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-18-08-2015 ರಂದು ಮದ್ಯಾಹ್ನ 14-30 ಗಂಟೆಗೆ  ಬೇತಮಂಗಲ ಪಿಎಸ್‌ಐ ಶ್ರೀ. ಗೋವಿಂದ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಆರೋಪಿಗಳಾದ  ನಾಗರಾಜ್‌, ರಾಮು,  ಅಂಜಿ, ಗಿರೀಶ್‌,  ವೆಂಕಟೇಶ್‌  ರವರುಗಳು ಕಣ್ಣೂರು ಗ್ರಾಮದ ಸಾರ್ವಜನಿಕ ಕರೆಯ ಅಂಗಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಆಟವಾಡುತ್ತಿದ್ದವರ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ  ಸ್ಥಳದಲ್ಲಿ 52 ಇಸ್ಪೀಟು ಎಲೆಗಳನ್ನು, 1800/- ರೂ ನಗದು ಹಣ ಹಾಗೂ 04 ದ್ವಿಚಕ್ರ ವಾಹನಗಳನ್ನು ವಶಫಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ.

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : 01

ಆಂಡ್ರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 18.08.2015  ರಂದು ಶ್ರೀಮತಿ ವಿಜಯಲಕ್ಷ್ಮಿ ನಾಯರ್‌, ನಂ. 6, ಆಂಡ್ರಸನ್‌ಪೇಟೆ ರವರು ನೀಡಿದ ದೂರಿನಲ್ಲಿ   ದೂರುದಾರರ ಮಗಳಾದ ಸುಬಾಷಿನಿ ನಾಯರ್  27 ವರ್ಷದವರು ಬಿ. ಕಾಂ ವ್ಯಾಸಂಗ ಮಾಡಿದ್ದು, ಕೆಲಸಕ್ಕಾಗಿ ಈಗ್ಗೆ 2-3 ಸಲ ದುಬಾಯ್ ಗೆ ಹೋಗಿ ಬಂದಿದ್ದು ಪುನಃ ಈಗ್ಗೆ 1 ತಿಂಗಳ ಹಿಂದೆ ದುಬಾಯ್ ನಲ್ಲಿರುವ ತನ್ನ ಸ್ನೇಹಿತಳಾದ ಷಬಿ ರವರನ್ನು ನೋಡಿಕೊಂಡು ಬಂದಿದ್ದು  2 ದಿನಗಳಿಂದ ದುಬಾಯ್ ನಲ್ಲಿರುವ ಆಕೆಯ ಸ್ನೇಹಿತೆ ಷಬಿ ರವರ ಬಳಿ  ಕೆಲಸದ ಬಗ್ಗೆ ಮಾತನಾಡುತ್ತಿದ್ದು  ತನಗೆ ಯಾವುದೇ ಕೆಲಸ ಸಿಗಲಿಲ್ಲವೆಂತಲೋ  ಮನ ನೊಂದು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18.08.2015 ರಂದು ಸಂಜೆ 4.45 ಗಂಟೆಯಿಂದ 7.45 ಗಂಟೆಯ ಮದ್ಯೆ ಜೂಬ್ಲಿ ಹಾಲ್ ಸ್ಟ್ರೀಟ್ ನಲ್ಲಿರುವ ನಮ್ಮ ವಾಸದ ಮನೆಯ ಡೈನಿಂಗ್ ಹಾಲ್ ನ ಮೇಲ್ಚಾವಣಿಗೆ ಅಳವಡಿಸಿದ್ದ ಒಂದು  ಕಬ್ಬಿಣದ ರಾಡ್‌ಗೆ ವೇಲ್ ನಿಂದ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s