ದಿನದ ಅಪರಾಧಗಳ ಪಕ್ಷಿನೋಟ 18 ನೇ ಆಗಸ್ಸ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:17.08.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:18.08.2015 ರ ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ :01

ಚಾಂಪಿಯನ್ ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 17.08.2015  ರಂದು  ಸಂಜೆ 5.45  ಗಂಟೆಯಲ್ಲಿ ದೂರುದಾರರಾದ ಶ್ರೀ.  ವಿಜಯರಾಘವನ್‌, ಹೆಚ್‌ಓಡಿ. ಡಾ||ಟಿಟಿಐಟಿ, ಕಾಲೇಜ್‌, ಚಾಂಪಿಯನ್‌ರೀಫ್ಸ್ ರವರು ನೀಡಿದ ದೂರಿನಲ್ಲಿ   ದಿನಾಂಕ;14.08.2015 ರಂದು ಸಂಜೆ 5.00 ಗಂಟೆಗೆ ಡಾ/ ಟಿ.ಟಿ.ಐ.ಟಿ ಕಾಲೇಜಿನ ನ್ಯೂ ಬ್ಲಾಕ್‌ ಮೈನಿಂಗ್ ಲ್ಯಾಬ್‌ ಮತ್ತು ಸಿ ಪ್ರೋಗ್ರಾಮಿಂಗ್ ಲ್ಯಾಬ್‌ ನ ಹಾಗೂ ಮೈನ್‌ ಬ್ಲಾಕ್‌ ಸರ್ವರ್‌ ರೂಂನ ಬಾಗಿಲುಗಳನ್ನು ಹಾಕಿಕೊಂಡು ಹೋಗಿದ್ದು, ಎರಡು ದಿನ ರಜೆ ಇದ್ದು,  ದಿನಾಂಕ;17.08.2015 ರಂದು ಬೆಳಿಗ್ಗೆ 9.00 ಗಂಟೆಗೆ ಬಂದು ಮೇಲ್ಕಂಡ ಲ್ಯಾಬ್‌ಗಳ ಮತ್ತು ಸರ್ವರ್ ರೂಂನ ಬಾಗಿಲುಗಳು ತೆಗೆದು ನೋಡಲಾಗಿ ಕಂಪ್ಯೂಟರ್ ಗಳನ್ನು ಬಿಚ್ಚಿ ನೆಲದ ಮೇಲೆ ಹಾಕಿದ್ದು, ಪರಿಶೀಲಿಸಲಾಗಿ ಕಂಪ್ಯೂಟರ್‌ಗಳಲ್ಲಿದ್ದ  1) MOTHER BOARD ,  2)  ICORE- 5 PROCESSOR/ DUAL CORE INTEL PROCESSOR AND RAM (4GB & 2GB) ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ  ಇವುಗಳ ಅಂದಾಜು ಮೊತ್ತ  1.53.550/- ರೂಗಳು ಬೆಲೆ ಬಾಳುವುದಾಗಿರುತ್ತದೆ.

-ಸಾಮಾನ್ಯ ಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 17.08.2015 ರಂದು ದೂರುದಾರರಾದ ಶ್ರೀ.  ಈರಪ್ಪ ನಾಟಿಕರ್‌, ಬಿನ್‌  ಮಾಡಗೊಂಡ,  ವಿಜೇಯೇಂದ್ರ , ಬಡಾವಣಿ,  ಬೇತಮಂಗಲ ರವರು ನೀಡಿದ  ದೂರಿನಲ್ಲಿ  ದಿನಾಂಕ: 15.08.2015 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ಕೆ.ಜಿ.ಎಫ್‌ಗೆ ಪಿರ್ಯಾಧಿದಾರರ ದ್ವಿಚಕ್ರ ವಾಹನ ಸಂಖ್ಯೆ ಕೆಎ 08 ಕೆ 5765 ರಲ್ಲಿ ಹೋಗಿ  ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸ್ಸು ಮನೆಗೆ ಮದ್ಯಾಹ್ನ 3.30  ದ್ವಿಚಕ್ರವಾಹನವನ್ನು  ಬೇತಮಂಗಲ ವಿಜೇಯೇಂದ್ರ, ಬಡಾವಣಿ ಬೇತಮಂಗಲದ ಮನೆಯ ಕಾಂಪೌಂಡ್ ನ ಒಳಗಡೆ ನಿಲ್ಲಿಸಿದ್ದು,   ದಿನಾಂಕ: 16.08.2015 ರಂದು ಬೆಳಿಗ್ಗೆ ಸುಮಾರು 6.00 ಗಂಟೆಗೆ ಮನೆಯಿಂದ ಹೊರಗಡೆ ಬಂದು  ಕಾಂಪೌಂಡ್ನಲ್ಲಿ ನಿಲ್ಲಿಸಿದ್ದ  ದ್ವಿಚಕ್ರವಾಹನವನ್ನು ನೋಡಿದಾಗ ವಾಹನವನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ.  ದ್ವಿಚಕ್ರವಾಹನದ  ಮೌಲ್ಯವು 11.400/ ರೂಗಳಾಗಿರುತ್ತದೆ.

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s