ದಿನದ ಅಪರಾಧಗಳ ಪಕ್ಷಿ ನೋಟ 17 ನೇ ಆಗಸ್ಟ್‌ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:16.08.2015 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:17.08.2015 ರ ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಕನ್ನ ಕಳುವು : 01

ರಾಬರ್ಟ್‌‌ಸನ್‌ಫೆಟೆ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.08.2015 ರಂದು ದೂರುದಾರರಾದ ಶ್ರೀ.  ನವೀನ್‌ ಕುಮಾರ್‌ ಬಿನ್‌  ನಾಗೇಂದ್ರನ್‌, ನಂ 328,  3 ನೇ ಕ್ರಾಸ್‌, ಗೌತಮ್‌ ನಗರ ರಾಬರ್ಟ್‌‌ಸನ್‌ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ:  15.08.2015 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ  ದೂರುದಾರರು ಅವರ ಮನೆಗೆ ಬೀಗವನ್ನು ಹಾಕಿಕೊಂಡು  ಕುಟುಂಬದೊಂದಿಗೆ ತಮಿಳುನಾಡಿನ ಕಾಟುಪಾಡಿಗೆ ಹೋಗಿ ದಿನಾಂಕ: 16.08.2015 ರಂದು ರಾತ್ರಿ 8.30 ಗಂಟೆಯಲ್ಲಿ  ಅವರ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು  ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಬೀಗವನ್ನು ಮುರಿದು ಮನೆಯ ಒಳಗಡೆ ಪ್ರವೇಶಿಸಿ ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ಮುರಿದು ಬೀರುವಿನ ಒಳಗಡೆ ಇಟ್ಟಿದ್ದ,  1) 06 ಚಿನ್ನದ ಕೈ ಬಳೆಗಳು ತೂಕ ಸುಮಾರು 72 ಗ್ರಾಂ ,   2 ) 01 ನೆಕ್ಲೆಸ್ ತೂಕ ಸುಮಾರು 32  ಗ್ರಾಂ,    3) 01 ಚಿನ್ನದ ಹಾರ ತೂಕ ಸುಮಾರು 42 ಗ್ರಾಂ,   4) 02 ಚಿನ್ನದ ಉಂಗುರಗಳು ತೂಕ ಸುಮಾರು 12 ಗ್ರಾಂ,   5) 01 ಜೊತೆ ಚಿನ್ನದ ಮಾಟಿಗಳು ತೂಕ ಸುಮಾರು 08 ಗ್ರಾಂ,     6) 01 ಜೊತೆ ಚಿನ್ನದ ಜುಮುಕಿ ತೂಕ ಸುಮಾರು 08 ಗ್ರಾಂ ಒಟ್ಟು ತೂಕ 174 ಗ್ರಾಂಗಳ ಚಿನ್ನದ ವಡವೆಗಳು ಇವುಗಳ ಒಟ್ಟು ಬೆಲೆ ಸುಮಾರು 1,45,900/- ರೂಗಳಾಗಿದ್ದು  ಸದರಿ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ

-ಸಾಮಾನ್ಯ ಕಳುವು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.08.2015 ರಂದು ದೂರುದಾರರಾದ ಶ್ರೀ ಅಶ್ವಥ ನಾರಾಯಣರೆಡ್ಡಿ ಬಿನ್‌  ತಿಮ್ಮಾರೆಡ್ಡಿ,  ಕೋಗಿಲಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ   ದೂರುದಾರರು  ತೋಟಕ್ಕೆ  ಡ್ರಿಪ್  ವೈರನ್ನು   6 ತಿಂಗಳ ಹಿಂದೆ 5800 ಮೀಟರ್ ಅಷ್ಟು  ಹಾಕಿದ್ದು ,  ದಿನಾಂಕ: 13-08-2015 ರಂದು ಸಂಜೆ ಡ್ರಿಪ್ ವೈರ್  ಇದ್ದು, ದಿನಾಂಕ: 14.08.2015  ಬೆಳಗ್ಗೆ 6 ಗಂಟೆಗೆ ತೋಟದ ಬಳಿ ನೋಡಲಾಗಿ ತೋಟಕ್ಕೆ ಹಾಕಿದ್ದ ಡ್ರಿಪ್ ವೈರ್ ನಲ್ಲಿ  ಸುಮಾರು 4/3 ರಷ್ಟೂ ಯಾರೋ ಕಳ್ಳರು ಕಳವು  ಮಾಡಿಕೊಂಡು ಹೋಗಿದ್ದು   ನಂತರ ಪಿರ್ಯಾದಿದಾರರು ಅಕ್ಕ ಪಕ್ಕದ  ತೋಟದವರನ್ನು ವಿಚಾರಣೆ ಮಾಡುತ್ತಿದ್ದಾಗ  ಪಿರ್ಯಾದಿದಾರರ  ಪಕ್ಕದ ತೋಟದ  ವಾಸಿಯಾದ ಶ್ರೀ ಆನಂಜಪ್ಪ ಬಿನ್ ರಾಮೇಗೌಡರವರು ಪಿರ್ಯಾದಿದಾರರಿಗೆ ತಿಳಿಸಿದ್ದೇನೆಂದರೆ ದಿನಾಂಕ 13-08-2015  ರಂದು  ಮಧ್ಯಾಹ್ನ ಸಮಯದಲ್ಲಿ  ಊರುಕೂಂಟೆ ಮಿಟ್ಟೂರು ಗ್ರಾಮದ ವಾಸಿಗಳಾದ ವೆಂಕಟರಾಮ್ ಮತ್ತು ಪ್ರಸಾದ್ ಹಾಗೂ ನಾಗಸಂದ್ರ ಗ್ರಾಮದ ಬಾಬು ಎಂಬುವರು  ಪಿರ್ಯಾದಿದಾರರ ತೋಟಗಳ ಬಳಿ ಸುತ್ತಾಡುತ್ತಿದ್ದರಂತ ತಿಳಿಸಿದ್ದರು  ಪಿರ್ಯಾದಿದಾರರು  2ದಿನಗಳಿಂದ ಅಲ್ಲ- ಅಲ್ಲಿ  ಇವರ ಬಗ್ಗೆ ವಿಚಾರಣೆ ಮಾಡಲಾಗಿ 3 ಜನರು ಜನರು ಊರುಗಳಲ್ಲಿ ಇಲ್ಲವೆಂತ ತಿಳಿಯಿತು  ಸದರಿ 3 ಜನರು ಮೇಲೆ ಪಿರ್ಯಾದಿದಾರ ತೋಟದಲ್ಲಿ ಹಾಕಿರುವ ಡ್ರಿಪ್ ವೈರ್ ಅನ್ನು  ಕಳವು ಮಾಡಿಕೊಂಡು ಹೋಗಿರ ಬಹುದೆಂತ ಅನುಮಾನ ಇರುತ್ತೆ,  ಕಳುವಾಗಿರುವ  ಡ್ರಿಪ್ ವೈರ್ ಬೆಲೆ ಸುಮಾರು  47,000/- ರೂ ಆಗಿರುತ್ತೆ.

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

-ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.08.2015 ರಂದು ದೂರುದಾರರಾದ ಶ್ರೀ ಚಲಪತಿ, ಹೆಚ್‌ಸಿ 210   ಬೇತಮಂಗಲ ರವರು ರಾತ್ರಿ ಕರ್ತವ್ಯಕ್ಕೆ ನೇಮಿಸಿದ್ದು, ಬೇತಮಂಗಲ ಹನುಮಂತ ನಗರದ ಕಡೆ  ಗಸ್ತು ಮಾಡುತ್ತಿದ್ದಾಗ  ದಿನಾಂಕ.16/17.08.2015 ರಂದು ಬೆಳಿಗಿನ ಜಾವ 3.00 ಗಂಟೆಗೆ ಬೇತಮಂಗಲ ಕ್ಯಾಸಂಬಳ್ಳಿ ರಸ್ತೆಯ ಸೆವೆನ್ ಹಿಲ್ಸ್ ಹಾಲು ಡೈರಿಯ ಮುಂಭಾಗ ಬಾಗಿಲು ಮುಂದೆ ಯಾರೋ ಒಬ್ಬ ಆಸಾಮಿಯ ತನ್ನ ಇರುವಿಕೆಯನ್ನು  ಮರೆಮಾಚುತ್ತಾ  ಕುಳಿತ್ತಿದ್ದು, ದೂರುದಾರರನ್ನು  ನೋಡಿ  ಅಲ್ಲಿಂದ ಓಡಲು ಪ್ರಯತ್ನಿಸಿದಾಗ ಆತನನ್ನು ಸುತ್ತು ವರೆದು ಹಿಡಿದುಕೊಂಡು ಆತನನ್ನು ಪರಿಶೀಲಿಸಲಾಗಿ ಆತನ ಬಳಿ ಒಂದು ಕಬ್ಬಿಣದ ರಾಡ್ ಇದ್ದು ಆತನ ಹೆಸರು  ವಿಳಾಸ ಹಾಗೂ ಆ ವೇಳೆಯಲ್ಲಿ  ಆತನು ಅಲ್ಲಿ ಇರುವಿಕೆಯ ಬಗ್ಗೆ ಕೇಳಲಾಗಿ  ಆತನು ತೊದಲುತ್ತಾ ಅಲ್ಲಿ ಇರುವಿಕೆಯ ಬಗ್ಗೆ ಸರಿಯಾದ ಸಮಜಾಯಿ ನೀಡದೆ ಆತನ ಹೆಸರು ಮಂಜು@ಮಂಜುನಾಥ ಬಿನ್ ಲೇಟ್ ವಿಶ್ವನಾಥ, 25 ವರ್ಷ,  ಕೊತ್ತೂರು ಗ್ರಾಮ.  ಎಂತ ತಿಳಿಸಿದ್ದು ಸದರಿ ಆಸಾಮಿಯು ಬೇರೆ ಊರಿನವನಾಗಿದ್ದು  ಅಲ್ಲಿ ಆವೇಳೆಯಲ್ಲಿ ಇರುವುದಕ್ಕೆ ಸರಿಯಾದ ಸಮಜಾಯಿಷಿ ನೀಡದೆ ಆತನ ಕೈಯಲ್ಲಿ ಕಬ್ಬಿಣದ ರಾಡ್ ಅನು ಹಿಡಿದುಕೊಂಡು ಕಳವು ಮಾಡುವ ಉದ್ಧೇಶದಿಂದ ಹೊಂಚು ಹಾಕುತ್ತಿರುವುದಾಗಿ ಸಂಶಯವಾಗಿದ್ದರಿಂದ ಆತನ ಮೇಲೆ ಕಾನೂನು ಕ್ರಮ ಜರುಗಿಸಲಾಗಿರುತ್ತೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s