ಪತ್ರಿಕ ಪ್ರಕಟಣೆ

ದಿನಾಂಕ ೧೫.೦೮.೨೦೧೫ ರಂದು ಮಧ್ಯಾಹ್ನ ೧.೦೦ ಗಂಟೆಗೆ ಕೋಲಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಮ್ಮ ಹಾಗೂ ಶ್ರೀ ಹರೀಶ್ ರವರುಗಳ ನೇತೃತ್ವದಲ್ಲಿ ೬೯ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೂಲಿಕುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಗಿಡ ನೆಡುವ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿವಿಧ ರೀತಿಯ ಗಿಡಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಾನ್ಯ ಪೊಲೀಸ್ ವರಿಷ್ಟಾಧಿಕಾರಿಗಳು ಅಗಮಿಸಿರುತ್ತಾರೆ.

ಸದರಿ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ|| ತ್ರಿಲೋಕ ಚಂದ್ರ ರವರು ಮಾತನಾಡಿ ಗ್ರಾಮಗಳಲ್ಲಿ ನೀರಿನ ತೊಂದರೆ ಇದ್ದು, ಪತ್ರಿಯೊಂದು ಗ್ರಾಮಕ್ಕೆ ಟ್ಯಾಂಕರ್‌ನಿಂದ ನೀರನ್ನು ಸರಬರಾಜು ಮಾಡುವುದಾಗಿ ತಿಳಿಸಿರುತ್ತಾರೆ. ಗ್ರಾಮ ಪಂಚಾಯಿತಿಯಿಂದ ಪ್ರತಿಯೊಂದು ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ೨-೩ ದಿನಗಳಲ್ಲಿ ಸ್ಥಾಪಿಸುವಂತೆ ಗ್ರಾಮ ಪಂಚಾಯಿತಿ ಇಇಓ ರವರಿಗೆ ಸೂಚಿಸಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ವರಿಷ್ಟಾಧಿಕಾರಿಗಳು, ಕೆ.ಜಿ.ಎಫ್ ರವರು ಮಾತನಾಡಿ ಕೋಲಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶ್ರೀಮತಿ. ಗೀತಮ್ಮರವರು ಈ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಿಂದಿನ ವರ್ಷ ಸುಮಾರು ೨೭ ಸಾವಿರ ವಿವಿಧ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದ್ದು, ಅವುಗಳನ್ನು ಮನೆಯ ಗಂಡು ಮಗನಂತೆ ಸಾಕಬೇಕೆಂತ ತಿಳಿಸಿರುತ್ತಾರೆ. ಹಾಗೂ ರೈತರು ಅತ್ಮಹತ್ಯೆ ಮಾಡಿಕೊಂಡರೆ ತಮ್ಮ ಮನೆಯ ಕಷ್ಟಗಳು ಇನ್ನು ಹೆಚ್ಚಾಗುತ್ತವೆ, ಯಾರೂ ರೈತರು ಅತ್ಮಹತ್ಯೆ ಮಾಡಿಕೊಳ್ಳಬೇಡಿ ನಿಮ್ಮ ಕಷ್ಟಗಳಿಗೆ ನಾವಿದ್ದೇವೆಂದು ತಿಳಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಕೋಲಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಮ್ಮ ರವರು ಮಾತನಾಡಿ ನಿಮಗೆ ನೀಡಿರುವ ಗಿಡಗಳನ್ನು ನಾಟಿ ಮಾಡಿ ನಿಮ್ಮ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವ ನೀರನ್ನೂ ಸಹ ಪೋಲಾಗದಂತೆ ಗಿಡಗಳಿಗೆ ಹಾಕಿದರೆ ಆ ಗಿಡವು ನಿಮ್ಮ ಮನೆಯ ಗಂಡು ಮಗುವಂತೆ ಬೆಳೆಯುತ್ತದೆಂದು ನುಡಿದಿರುತ್ತಾರೆ.

DSC04170 DSC04172 DSC04173 DSC04181 DSC04188

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s