ದಿನದ ಅಪರಾಧಗಳ ಪಕ್ಷಿನೋಟ 14ನೇ ಆಗಸ್ಟ್ 2015 ಸಂಜೆ

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:14.08.2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00  ಗಂಟೆಯವರೆಗೆ ದಾಖಲಾದ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : ಇಲ್ಲ.

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ.

-ಹಲ್ಲೆ : ಇಲ್ಲ

-ಮೋಸ : ಇಲ್ಲ.

-ಅಪಹರಣ : ಇಲ್ಲ.

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲ್ಲೂಕು ತಹಶೀಲ್ದಾರರಾದ ಶ್ರೀ. ವಿಜಯ್. ಡಿ.ಎಸ್ ರವರು ನೀಡಿದ ದೂರಿನಲ್ಲಿ, ಬೇತಮಂಗಲ ಗ್ರಾಮದ ದೊಡ್ಡ ಕೆರೆಗೆ ಸಂಬಂಧಿಸಿದ ವಡ್ಡಹಳ್ಳಿ ಗ್ರಾಮದ ಸರ್ವೆ ನಂ 24 ರಲ್ಲಿ 30 ಎಕೆರೆ ಜಮೀನಿನೊಳೆಗೆ ಆರೋಪಿ ವೆಂಕಟಾಚಲಪತಿ, ನತ್ತ ಗ್ರಾಮ ರವರು ಅತಿಕ್ರಮ ಪ್ರವೇಶ ಮಾಡಿ ನೀಲಗೀರಿ ಮರಗಳನ್ನು ಮತ್ತು ಸರ್ವೆ ಮರಗಳನ್ನು ನೆಟ್ಟು ಸರ್ಕಾರಿ ರಾಜಕಾಲುವೆಯಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿರುತ್ತಾರೆ.

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 09.08.2015 ರಂದು  ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ  ಈ ಕೇಸಿನ ದೂರುದಾರರಾದ ಮುನಿರಾಜು, 26 ವರ್ಷ, ನಾರಾಯಣಪುರ, ಬಂಗಾರಪೇಟೆ ರವರು ತನ್ನ ಅಕ್ಕನ ಮಗಳಾದ  ವಿದ್ಯಾಶ್ರೀ ರವರನ್ನು ತನ್ನ ದ್ವಿಚಕ್ರ ವಾಹನ ಬಜಾಜ್ ಡಿಸ್ಕವರಿ ವಾಹನ ಸಂಖ್ಯೆ KA-08, R-2088  ರಲ್ಲಿ ಕುಳ್ಳರಿಸಿಕೊಂಡು ಬಂಗಾರಪೇಟೆಯ ಬಾಲಕೀಯರ ಪ್ರೌಡಶಾಲೆ ಬಳಿ ಹೋಗುತ್ತಿರುವಾಗ,  ಸ್ಕೂಲ್ ಕಡೆಯಿಂದ ಆರೋಪಿ ತನ್ನ ಕಾರು  ಸಂಖ್ಯೆ- KA-01, MB-7015  ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ವಿದ್ಯಾಶ್ರೀ ರವರ ಎಡಗಾಲಿನ ಕಿರುಬೆರಳು ತುಂಡಾಗಿ, ಪಾದದ ಮೂಳೆ  ಮುರಿದು ರಕ್ತಗಾಯವಾಗಿರುತ್ತೆ.

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀ ನಾರಾಯಣ @ ಸ್ಯಾಮ್‌ಸನ್ ಬಿನ್ ಕೃಷ್ಣಯ್ಯ, ವಯಸ್ಸು 48 ವರ್ಷ, ಎ.ಡಿ.ಹೆಚ್. ಜನಾಂಗ, ವಾಸ: ಎನ್.ಟಿ.ಬ್ಲಾಕ್‌ ತೆಲುಗು ಲೈನ್, ಉರಿಗಾಂ, ಕೆ.ಜಿ.ಎಫ್. ಇವರ ಮಗ ಶ್ರೀ ಸುರೇಶ್ (20) ಎಂಬುವನು ಬೆಂಗಳೂರಿನ ಅಖಿಲ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದು, ಸದರಿ ಸುರೇಶ್‌ನು ದಿನಾಂಕ: 06.08.2015 ರಂದು ಅಖಿಲ ಹುಡುಗಿಯೊಂದಿಗೆ ಎಲ್ಲಿಯೋ ಹೋಗಿದ್ದು, ಈ ಸಂಬಂಧ ಅಖಿಲ ರವರ ಪೋಷಕರು ಬೆಂಗಳೂರು ನಗರದ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರಿಂದ, ದಿನಾಂಕ: 11.08.2015 ರಂದು ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸರು ಅಖಿಲ ಹುಡುಗಿಯನ್ನು ಪತ್ತೆ ಹಚ್ಚಿ, ಆಕೆಯ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದರಿಂದ, ಸುರೇಶ್‌ನು ಅಂದಿನಿಂದ ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದು, ದಿನಾಂಕ: 14.08.2015 ರಂದು ಬೆಳಿಗ್ಗೆ ಎನ್.ಟಿ.ಬ್ಲಾಕ್‌ ಸಮೀಪವಿರುವ ಬಯಲು ಪ್ರದೇಶದಲ್ಲಿ ಯಾವುದೋ ವಿಷ ಸೇವಿಸಿ ಮೃತಪಟ್ಟಿದ್ದ ಸುರೇಶ್ ನ ಮೃತದೇಹ ಪತ್ತೆಯಾಗಿರುತ್ತದೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s