ದಿನದ ಅಪರಾಧಗಳ ಪಕ್ಷಿನೋಟ 11 ನೇ ಆಗಸ್ಟ್‌ 2015

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:10.08.2015 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:11.08.2015   ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು. 

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : ಇಲ್ಲ

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ :02

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:10.08.2015 ರಂದು ದೂರುದಾರರಾದ ಶ್ರೀ. ರಘುನಾಥ್‌ ಬಿನ್‌ ಗೋಪಿ, ಬೌರಿಲಾಲ್‌ ಪೇಟೆ ರವರು ನೀಡಿದ ದೂರಿನಲ್ಲಿ  ದಿನಾಂಕ:10.08.2015 ರಂದು ರಾತ್ರಿ ಸುಮಾರು 10.30 ಗಂಟೆಯ ಸಮಯದಲ್ಲಿ ಬೌರಿಲಾಲ್ ಪೇಟೆಯ ಶ್ರೀ.ಕರುಮಾರಿಯಮ್ಮ ದೇವಾಲಯದ ಜಾತ್ರೆ ಪ್ರಯುಕ್ತ  ಬೌರಿಲಾಲ್ ಪೇಟೆಯ  ಮಸೀದಿ ಸರ್ಕಲ್ ನಲ್ಲಿ ದೂರುದಾರರ ತಮ್ಮ ವಿನೋದ್ ಆರ್ಕೆಸ್ಟ್ರಾ ನೋಡುತ್ತಿರುವಾಗ ಅದೇ ಕೇರಿಯ ವಾಸಿಗಳಾದ ಡಾಮ, ನವೀನ್, ಚಾಲಾ ಮತ್ತು ತಂಗಾ ಎಂಬುವವರು ಏಕೋದ್ದೇಶದಿಂದ ವಿನೋದ್ ರವರ ಬಳಿ ಬಂದು ಜಗಳ ಮಾಡಿದ್ದು, ಈ ವಿಚಾರದಲ್ಲಿ ರಾತ್ರಿ ಸುಮಾರು 10.45 ಗಂಟೆಗೆ ದೂರುದಾರರು ಮತ್ತು ಆತನ  ಅಣ್ಣನಾದ ಬಾಬು ರವರು ಡಾಮ ರವರ ಮನೆಯ ಬಳಿಗೆ ಹೋಗಿ ಏಕೆ ನನ್ನ ತಮ್ಮನಾದ ವಿನೋದ್ ನ ಬಳಿ  ಜಗಳ ಮಾಡಿದ್ದು ಎಂದು ಕೇಳಿದ್ದಕ್ಕೆ ಡಾಮ ಎಂಬಾತನು ಪಿರ್ಯಾದಿಯ ಅಣ್ಣ ಬಾಬುನನ್ನು ಕೈ ಮುಷ್ಠಿಯಿಂದ ಬಾಯಿಯ ತುಟಿಯ ಮೇಲೆ ಗುದ್ದಿ ರಕ್ತಗಾಯಪಡಿಸಿರುತ್ತಾರೆ.

ಆಂಡ್ರಸನ್‌ಪೇಟೆ  ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:10.08.2015 ರಂದು ದೂರುದಾರರಾದ  ಶ್ರೀ.  ವೆಂಕಟರಮಣ ಬಿನ್‌.  ಗೋವಿಂದಪ್ಪ,  ಕಂಗಾಂಡ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ಈಗ್ಗೆ 3 ವರ್ಷಗಳ ಹಿಂದೆ ಆರೋಪಿಗಳಾದ ಮುನಿಸ್ವಾಮಿ, ಮಂಜುನಾಥ,  ಶಂಕರ್‌,  ಗಿರಿಜಾಕುಮಾರ್‌ ಎಲ್ಲರೂ ವಾದಂಡಹಳ್ಳಿ ಗ್ರಾಮರವರಿಗೆ  1,75,000/- ರೂ ಸಾಲವಾಗಿ ಕೊಟ್ಟಿದ್ದು ಈ ವಿಚಾರದಲ್ಲಿ ದಿನಾಂಕ 09.08.2015 ರಂದು ರಾತ್ರಿ 8.00 ಗಂಟೆಗೆ ಕೋಗಿಲೆಹಳ್ಳಿಗೆ ಹೋಗಿ ಆರೋಪಿ ಮುನಿಸ್ವಾಮಿ ರವರನ್ನು  ಸಾಲದ ಹಣವನ್ನು ಕೇಳುತ್ತಿದ್ದಾಗ ನಿಮಗೆ ಯಾವುದೇ ಸಾಲದ ಹಣವನ್ನು ಕೊಡಬೇಕಾಗಿಲ್ಲ ಎಂದು ಕೆಟ್ಟ ಮಾತುಗಳಿಂದ ಬೈದ್ದು  ಕಲ್ಲಿನಿಂದ ಪಿರ್ಯಾದಿಯ ಬಲ ಮೊಣಕೈ ಮೇಲೆ ಹಾಗೂ ಬಲ ಕಾಲಿನ ಹೆಬ್ಬೆರಳಿನ ಮೇಲೆ ಹೊಡೆದು ರಕ್ತಗಾಯ ಪಡೆಸಿರುತ್ತಾರೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಪಘಾತಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ :10.08.2015 ರಂದು ದೂರುದಾರರಾದ ಶ್ರೀಮತಿ ಸುನಂದಮ್ಮ ಕೋಂ ಶ್ರೀನಿವಾಸ  ಕೀರ್ತಿಕುಪ್ಪ ಗ್ರಾಮ ರವರು ನೀಡಿದ ದೂರಿನಲ್ಲಿ  ದಿನಾಂಕ: 10.08.2015 ರಂದು ಬೆಳಿಗ್ಗೆ ಸುಮಾರು 8.30 ಗಂಟೆಯಲ್ಲಿ ದೂರುದಾರರು  ಕೆಲಸಕ್ಕೆ ಹೋಗುವ ಸಲುವಾಗಿ ಕೀರ್ತಿ ಕುಪ್ಪ ಗ್ರಾಮದಿಂದ ಆಟೋದಲ್ಲಿ ರಾಬರ್ಟ್ ಸನ್ ಪೇಟೆಯ ಸ್ವರ್ಣನಗರದ ಬಳಿ ಇರುವ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಆಟೋದಿಂದ  ಇಳಿದು, ಆಟೋ ಡ್ರೈವರ್ ಗೆ ಬಾಡಿಗೆ ಹಣ  ಕೊಡುತ್ತಿರುವಾಗ ಹೀರೋ ಹೊಂಡಾ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07 ಐ-2126 ರ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋ ಬಳಿ ನಿಂತಿದ್ದ ದೂರುದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ತಲೆಯ ಮೇಲೆ, ಎರಡು ಕೈಗಳಿಗೆ ರಕ್ತಗಾಯವಾಗಿರುತ್ತೆ. ಸದರಿ ದ್ವಿಚಕ್ರ ವಾಹನ ಸವಾರನು ಡಿಕ್ಕಿ ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ.

-ಭದ್ರತಾ ಕಾಯ್ದೆ : ಇಲ್ಲ

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ಲ್ಲಿ ಸಂಪರ್ಕಿಸಬಹುದಾಗಿರುತ್ತದೆ

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s