ದಿನದ ಅಪರಾಧಗಳ ಪಕ್ಷಿನೋಟ 05ನೇ ಆಗಸ್ಟ್ 2015

  ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:04.08.2015 ರಂದು ಸಂಜೆ 5.00 ಗಂಟೆಯಿಂದ  ದಿನಾಂಕ:05.08.2015   ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ.

-ಕೊಲೆಗೆ ಪ್ರಯತ್ನ : ಇಲ್ಲ.

-ಡಕಾಯತಿ : ಇಲ್ಲ.

-ಸುಲಿಗೆ : ಇಲ್ಲ.

-ಕನ್ನ ಕಳುವು : 01

ಚಾಂಪಿಯನ್‌ರೀಫ್ಸ್‌ ಪೊಲೀಸ್‌ ಠಾಣೆಯಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.08.2015 ರಂದು ದೂರುದಾರರಾದ ಶ್ರೀ. ಗಣೇಶ್‌ ಕಾಮಥ್‌ ಬಿನ್‌ ಕಾಮಥ್ ನಂ 15, ನ್ಯೂಮಾಡಲ್‌ ಹೌಸ್‌, ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ, ದಿನಾಂಕ: 29-07-2015 ರಂದು ಫಿರ್ಯಾದಿ ತಂದೆ-ತಾಯಿ ರವರು ಮದ್ಯಾಹ್ನ ಸುಮಾರು 02.30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ತನ್ನ ಸ್ವಂತದವರ ಊರಾದ ಮಂಗಳೂರಿಗೆ ಹೋಗಿದ್ದು, ದಿನಾಂಕ: 04-08-2015 ರಂದು ಮಧ್ಯಾಹ್ನ ಸುಮಾರು 12.00 ಗಂಟೆಗೆ ಕೆ.ಜಿ.ಎಫ್. ಗೆ ಬಂದು ಮನೆಯನ್ನು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲಿನ ಪಾಟ್ ಲಾಕ್ ನ್ನು ಕಿತ್ತು, ಮನೆಯೊಳಗೆ ಪ್ರವೇಶಿಸಿ, ಗೋದ್ರೇಜ್ ಬೀರುವಿನಲ್ಲಿಟ್ಟಿದ್ದ ಪಿರ್ಯಾದಿ ತಾಯಿಯವರ ಬಂಗಾರದ ಕತ್ತಿನ ಸರ, ಮೂರು ಬಂಗಾರದ ಉಂಗರಗಳು ಮತ್ತು ನಗದು ಹಣ ರೂ 7,000/- ಎಲ್ಲ ಒಟ್ಟು ಬೆಲೆ ಸುಮಾರು ರೂ.69,000/- ಗಳು ಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

-ಕಳವು ಪ್ರಕರಣ : ಇಲ್ಲ.

-ಸಾಮಾನ್ಯ ಕಳುವು : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ ದಾಖಲಾಗಿರುತ್ತದೆ ದಿನಾಂಕ 04-08-2015 ರಂದು ಮದ್ಯಾಹ್ನ ಸುಮಾರು 2-30 ಗಂಟೆಯಲ್ಲಿ ದೂರುದಾರರಾದ ಶ್ರೀ ಮಂಜುನಾಥ ಪೊಲೀಸ್‌ ಕಾನ್ಸ್‌ಟೇಬಲ್‌ ರವರು ಠಾಣಾ ಸರಹದ್ದಿನ ಮರಾಠಾ ಹೊಸಹಳ್ಳಿಯಿಂದ ಕಾಡು ಕದಿರೇನಹಳ್ಳಿ ಕಡೆಗೆ ಬರುತ್ತಿದ್ದಾಗ ಆರೋಪಿ ಶಾಂತಕುಮಾರ್ ರವರು ದ್ವಿಚಕ್ರ ವಾಹನ ಬಜಾಜ್ ಡಿಸ್ಕವರ್ ಸಂಖ್ಯೆ ಕೆಎ-07-ಆರ್-5659 ನ್ನು ತಳ್ಳಿಕೊಂಡು ಹೋಗುತ್ತಿದ್ದು, ಗಸ್ತಿನಲ್ಲಿದ್ದ ದೂರುದಾರರಿಗೆ ಅನುಮಾನ ಬಂದು ವಿಚಾರಿಸಿದಾಗ ಓಡಲು ಪ್ರಯತ್ನಿಸಿದ್ದು, ಆತನನ್ನು ಹಿಡಿದು ವಾಹನದ ಬಗ್ಗೆ ವಿಚಾರ ಮಾಡಲಾಗಿ ತೊದಲುತ್ತಾ ಈ ವಾಹನವನ್ನು ತಾನು ಮತ್ತು ಆರೋಪಿ ನಾಗೇಶ್ ರವರು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ.ಅದುದರಿಂದ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.

-ದೊಂಬಿ : ಇಲ್ಲ

-ಹಲ್ಲೆ : 03

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.08.2015 ರಂದು ದೂರುದಾರರಾದ ಶ್ರೀ. ದೊರಬಾಬು ಬಿನ್‌ ಗೋಪಾಲಪ್ಪ, ಪೂಗಾನಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಮಯದಲ್ಲಿ ಆರೋಪಿ ಮುರಳಿಮೋಹನ್‌ ಮತ್ತು ಗೋಪಾಲ ಗಂದೋಡಹಳ್ಳಿ ಗ್ರಾಮದವರು ದೂರುದಾರರಿಂದ ಕೈ ಸಾಲವಾಗಿ 20,000/- ರೂ ಹಣವನ್ನು ಪಡೆದುಕೊಂಡಿದ್ದು ಅದರಲ್ಲಿ 3,000/- ರೂಗಳು ಹಿಂದಿರುಗಿಸಿದ್ದು ಉಳಿದ 17,000/- ರೂಗಳು ಆರೋಪಿಗಳೂ ವಾಪಸ್ಸು ಕೊಡದೆ ಇದ್ದುದರಿಂದ, ಹಣವನ್ನು ಕೇಳಲು ಹೋಗಿದ್ದಾಗ ಕೆಟ್ಟ ಮಾತುಗಳಿಂದು ಬೈದು ಕೈಗಳಿಂದ ಹೊಡೆದು ಗಾಯಪಡಿಸಿ ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 04.08.2015 ರಂದು ದೂರುದಾರರಾದ ಶ್ರೀ ಅನಿಲ್‌ ಕುಮರ್ ಬಿನ್‌ ರವಿ ಅಂಕತಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ.04.08.2015 ರಂದು ದೂರುದಾರರು ತಮ್ಮ ತೋಟಕ್ಕೆ ಹೋಗಿಲು ಹೋಗುತ್ತಿದ್ದಾಗ ಆರೋಪಿ ನಾರಾಯಣಸ್ವಾಮಿ ರವರು ದಾರಿಯಲ್ಲಿ ದೂರುದಾರರ ವಾಹವನ್ನು ಅಡ್ಡಗಟ್ಟಿ ನಿಲ್ಲಿಸಿ ಏಕಾಏಕಿ ಗಲಾಟೆ ಮಾಡಿ ಕೈಗಳಿಂದ ಮೈಮೇಲೆ ಗುದ್ದಿ, ರಕ್ತ ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ.ದಿನಾಂಕ 04.08.2015 ರಂದು ದೂರುದಾರರಾದ ಶ್ರೀಮತಿ ಅನುಸುಯಮ್ಮ ಕೋಂ ನಾರಾಯಣಸ್ವಾಮಿ ಅಂಕತಟ್ಟಹಳ್ಳಿ ಗ್ರಾಮದವರು ನೀಡಿದ ದೂರಿನಲ್ಲಿ ದಿನಾಂಕ.04.08.2015 ರಂದು ದೂರುದಾರರ ಗಂಡನಾದ ನಾರಾಯಣಸ್ವಾಮಿ ರವರು ತಮ್ಮ ಗ್ರಾಮದ ಹೊರವಲಯದಲ್ಲಿರುವ ರೇಷ್ಮೆ ಸಾಕಾಣಿಕೆಯ ಮನೆ ಹತ್ತಿರ ಕುಳಿತ್ತಿರುವಾಗ ಆರೋಪಿಗಳಾದ ಅನಿಲ್‌ ಕುಮಾರ ಮತ್ತು ರವಿ ರವರು ತನ್ನ ದ್ವಿಚಕ್ರವಾಹನದಲ್ಲಿ ಬಂದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹೊಡೆದು ಗಲಾಟೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

-ಮೋಸ : ಇಲ್ಲ

-ಅಪಹರಣ : ಇಲ್ಲ

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : ಇಲ್ಲ

-ಮನುಷ್ಯ ನಾಪತ್ತೆ : ಇಲ್ಲ

-ಇತರೆ ಪ್ರಕರಣಗಳು:ಇಲ್ಲ

 -ಜೂಜಾಟ ಕಾಯ್ದೆ : ಇಲ್ಲ

-ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : 01

ಬೇತಮಂಗಲ ಪೊಲೀಸ್‌ ಭದ್ರತಾ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 05.08.2015 ರಂದು ಬೆಳಿಗ್ಗಿನ ಜಾವ ಸುಮಾರು 2.00 ಗಂಟೆ ಸಮಯದಲ್ಲಿ ದೂರುದಾರರು ರಾತ್ರಿ ವಿಶೇಷ ಗಸ್ತಿನಲ್ಲಿ ಬೇತಮಂಗಲ-ವಿಕೋಟೆ ಮುಖ್ಯ ರಸ್ತೆಯ ಬೆಟ್ಕೂರು ಗ್ರಾಮದ ಗೇಟ್ ಬಳಿ ಬರುತ್ತಿದ್ದಾಗ ಪ್ರಯಾಣಿಕರ ತಂಗು ದಾಣ ಹತ್ತಿರ ಯಾರೋ ಒಬ್ಬ ಆಸಾಮಿಯು ತನ್ನ ಇರುವಿಕೆಯನ್ನು ಮರೆಮಾಚಿಕೊಂಡಿದ್ದವನನ್ನು ಹಿಡಿದು ಆತನನ್ನು ಅಲ್ಲಿರುವ ಬಗ್ಗೆ ವಿಚಾರಣೆ ಮಾಡಲಾಗಿ ಸರಿಯಾದ ಸಮಜಾಯಿಷಿ ನೀಡದೆ ಆರೋಪಿ ತನ್ನ ಬಳಿ ಎರಡು ಚಾಕುಗಳನ್ನು ಇಟ್ಟುಕೊಂಡು ಕಳುವು ಮಾಡುವ ಉದ್ದೇಶದಿಂದ ಹೊಂಚು ಹಾಕಿರುತ್ತಾನೆಂತ ಸಂಶಯ ಮೇರೆಗೆ ಆರೋಪಿಯ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿರುತ್ತೆ.

-ಅಸ್ವಾಭಾವಿಕ ಮರಣ : ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ

 

 

This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s