ದಿನದ ಅಪರಾಧಗಳ ಪಕ್ಷಿನೋಟ 18ನೇ ನವೆಂಬರ್‍ ೨೦೧೩

ಕೆ.ಜಿ.ಎಫ್ ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ: 18.11.2013 ರ 7.00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.

-ಕೊಲೆ : ಇಲ್ಲ

-ಕೊಲೆಗೆ ಪ್ರಯತ್ನ : ಇಲ್ಲ

-ಡಕಾಯತಿ : ಇಲ್ಲ

-ಸುಲಿಗೆ : ಇಲ್ಲ

-ಮನೆ ಕಳ್ಳತನ : ಇಲ್ಲ

-ಕಳವು ಪ್ರಕರಣ : ಇಲ್ಲ

-ಮೋಸ/ವಂಚನೆ : ಇಲ್ಲ

-ವಾಹನ ಕಳ್ಳತನ : ಇಲ್ಲ

-ಅಪಘಾತಗಳು : ಇಲ್ಲ

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

-ಮೋಸ :ಇಲ್ಲ

-ಮನುಷ್ಯ ಕಾಣೆಯಾದ ಪ್ರಕರಣಗಳು : ಇಲ್ಲ

-ಇತರೆ ಪ್ರಕರಣಗಳು : ಇಲ್ಲ

-ಜೂಜಾಟ ಕಾಯ್ದೆ :ಇಲ್ಲ

-ಅಸ್ವಾಭಾವಿಕ ಮರಣ : ೦೨

ಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 14-11-2013 ರಂದು ಪಿರ್ಯಾದಿಯಾದ ಬಾಬು.ಎ.ಸಿ, Agrahar ಗ್ರಾಮ, ಮಾಲೂರು ತಾಲೂಕು ಬುವರ ಮಾವ ನಾರಾಯಣಸ್ವಾಮಿ ರವರು ಬಂಗಾರಪೇಟೆ ತಾಲ್ಲೂಕು ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಮೃತಪಟ್ಟಿದ್ದು, ಈತನ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಮಧ್ಯಾಹ್ನ ಸುಮಾರು 2-30 ಗಂಟೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮದ ರಸ್ತೆಯಲ್ಲಿ ಪಟಾಕಿಗಳನ್ನು ಅಂಟಿಸುತ್ತಿದ್ದು, ಪಟಾಕಿಗಳ ರೋಲನ್ನು ಹಿಡಿದುಕೊಂಡಿದ್ದ ಯಾರೋ ಒಬ್ಬ ಹುಡುಗ ಭಯಕ್ಕೆ ಪಟಾಕಿ ರೋಲನ್ನು ಬಿಸಾಡಿದ್ದು, ಆಕಸ್ಮಿಕವಾಗಿ ಪಿರ್ಯಾದಿಯ ಅಣ್ಣ ವೆಂಕಟೇಶ್ ರವರ ಮೈ ಮೇಲೆ ಬಿದ್ದು ಸುಟ್ಟುಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ. 16-11-2013 ರಂದು ರಾತ್ರಿ ಸುಮಾರು 12-00 ಗಂಟೆಯಲ್ಲಿ ಸುಟ್ಟ ಗಾಯಗಳ ದೆಸೆಯಿಂದ ಮೃತಪಟ್ಟಿರುತ್ತಾನೆ.

ಚಾಂಪಿಯನ್‌ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 17-11-2013 ರಂದು ಮಧ್ಯಾಹ್ನ ಸುಮಾರು 12.30 ಗಂಟೆಯಲ್ಲಿ ಪಿರ್ಯಾದಿಯಾದ ವೆಂಕಟಮ್ಮ, ನಂ., 112, Married Qtrs. ಜಿ-ಬ್ಲಾಕ್, ಚಾಂಪಿಯನ್‌ರೀಫ್ಸ್, ಕೆ.ಜಿ.ಎಫ್ ಎಂಬುವರ ಮೊಮ್ಮಗ ಸಂತೋಷ್‌‌ಕುಮಾರ್, ವಯಸ್ಸು ಸುಮಾರು 27 ವರ್ಷ, ಹೆಚ್.ಎ.ಎಲ್ ನೌಕರ ಎಂಬಾತನು ತಮ್ಮ ಮನೆಯ ಕಾಂಪೌಂಡ್‌ ಒಳಗಿನ ನೀರಿನ ಸಂಪನ್ನು ಸ್ವಚ್ಚ ಮಾಡು ಸಮಯದಲ್ಲಿ ಅದಕ್ಕೆ ಅಳವಡಿಸಿದ ಮೋಟಾರಿನ ತಂತಿಯನ್ನು ತೆಗೆಯುವ ಸಮಯದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ ತಗುಲಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮೃತಪಟ್ಟಿರುತ್ತಾನೆ.

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Advertisements
This entry was posted in Uncategorized. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s