ದಿನದ ಅಪರಾಧಗಳ ಪಕ್ಷಿನೋಟ 12ನೇ ಸೆಪ್ಟೆಂಬರ್‍ 2015

ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 12.09.2015 ರಂದು  ಬೆಳಗ್ಗೆ 10. 00 ಗಂಟೆಯಿಂದ ದಿನಾಂಕ ಸಂಜೆ 5.00  ಗಂಟೆಯವರೆಗೆ ದಾಖಲಾಗಿರುವ ಪ್ರಕರಣಗಳ ವಿವರಗಳು.

-ಕೊಲೆ : ಇಲ್ಲ,

-ಕೊಲೆಗೆ ಪ್ರಯತ್ನ : ಇಲ್ಲ,

-ಡಕಾಯತಿ : ಇಲ್ಲ, -ಸುಲಿಗೆ :ಇಲ್ಲ,

-ಕನ್ನ ಕಳುವು : ಇಲ್ಲ,

-ಕಳವು ಪ್ರಕರಣ : 01

ಬೇತಮಂಗಳ ಪೊಲೀಸ್‌ ಠಾಣೆಯ ಸರಹದ್ದಿನ ಸುಂದರಪಾಳ್ಯ ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್  ಬ್ಯಾಂಕಿನಲ್ಲಿ ಕಳವು ಪ್ರಯತ್ನಕ್ಕೆ ಸಂಬಂದಿಸಿದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.09.2015 ರಂದು ಮದ್ಯಾಹ್ನ 1.00  ಘಂಟೆಯಲ್ಲಿ ದೂರುದಾರರಾದ ಶ್ರೀ  ಆಶೋಕ್‌ ಕುಮಾರ್‌ ಬ್ಯಾಂಕಿನ ವ್ಯವಸ್ಥಾಪಕರು ಸುಂದರಪಾಳ್ಯ ರವರು ನೀಡಿದ ದೂರಿನಲ್ಲಿ ದೂರುದಾರರು ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್ ಸುಂಧರಪಾಳ್ಯ ಶಾಖೆಯ  ವ್ಯವಸ್ಥಾಪಕರಾಗಿದ್ದು,   ದಿನಾಂಕ 11.09.2015 ರಂದು  ಸಂಜೆ 5.45 ಗಂಟೆಯ ಸಮಯದಲ್ಲಿ ಕೆಲಸ ಮುಗಿಸಿಕೊಂಡು  ಬ್ಯಾಂಕಿನ ಎಲ್ಲಾ ಬಾಗಿಲು ಮತ್ತು ಭದ್ರತಾ ಕೊಠಡಿಯ ಬಾಗಿಲನ್ನು  ಹಾಕಿಕೊಂಡು ಬೆಂಗಳೂರಿಗೆ ಮನೆಗೆ   ಹೋಗಿದ್ದಾಗ ದಿನಾಂಕ 12.09.2015 ರಂದು ಬೆಳಗ್ಗೆ 7.15 ಗಂಟೆಯ ಸಮಯದಲ್ಲಿ ಬ್ಯಾಂಕಿನ  ಬಿಲ್ಡಿಂಗ್ ಮಾಲೀಕರಾದ ಲಕ್ಷ್ಮಿ ನಾರಾಯಣಶರ್ಮ ರವರು ಎಸ್.ಬಿ.ಎಂ ಬ್ಯಾಂಕ್ ನ ಹಿಂಬಾಗದ ಗೋಡೆಯನ್ನು ಯಾರೋ ಕಳ್ಳರು ಯಾವುದೋ  ಒಂದು ಆಯುದದಿಂದ  ಹೊಡೆದು ಬ್ಯಾಂಕಿನ ಒಳಗೆ ಪ್ರವೇಶ ಮಾಡಿರುವುದಾಗಿ ತಿಳಿಸಿದ್ದು,  ಪಿರ್ಯಾದಿದಾರರು ಬೆಳಗ್ಗೆ 10.00 ಗಂಟೆಯ ಸಮಯದಲ್ಲಿ ಬ್ಯಾಂಕನ್ನು ಬಂದು ನೋಡಲಾಗಿ  ಬ್ಯಾಂಕಿನ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ  ಕ್ಯಾಷ್  ಕೌಂಟರ್ ಮತ್ತು  ಇತರೆ ಕೌಂಟರ್ ಗಳನ್ನು  ಚೆಲ್ಲಾಪಿಲ್ಲಿ ಮಾಡಿ ಬ್ಯಾಂಕಿನಲ್ಲಿದ್ದ 4 ಸಿಸಿ ಟಿವಿ ಕ್ಯಾಮರಾಗಳನ್ನು ಸಹ ಜಖಂಗೊಳಿಸಿ, ಬ್ಯಾಂಕಿನ ಸೈರನ್ ಪೈರ್ ಅಲಾರಂ  ಸಹ ಜಖಂಗೊಳಿಸಿ  ಮೊಡಂ ಮತ್ತು  ರೌಟರ್ ಗಳನ್ನು  ಕಿತ್ತು ಹಾಕಿ ತೆಗೆದುಕೊಂಡು ಹೋಗಿರುತ್ತಾರೆ. ಸದರಿ ಕಳವು ಪ್ರಯತ್ನ ಕೃತ್ಯವು  ದಿನಾಂಕ 11.09.2015 ರಿಂದ ಸಂಜೆ 5.45 ಗಂಟೆಯಿಂದ ದಿನಾಂಕ 12.09.2015 ರಂದು ಬೆಳಗ್ಗೆ  7.15 ಗಂಟೆಯ ಮದ್ಯ ಸಂಭವಿಸಿರುತ್ತೆ  ಬ್ಯಾಂಕಿನಲ್ಲಿ ಹಣ ಮತ್ತು ಒಡವೆಗಳು  ಸುರಕ್ಷಿತವಾಗಿರುತ್ತದೆ.

-ಸಾಮಾನ್ಯ ಕಳುವು : ಇಲ್ಲ,

-ದೊಂಬಿ : ಇಲ್ಲ

-ಹಲ್ಲೆ : ಇಲ್ಲ

-ಅಪಹರಣ : ೦1

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಹುಡುಗಿಯನ್ನು ಅಪಹರಣ ಮಾಡಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 12.09.2015 ರಂದು ದೂರುದಾರರಾದ ಶ್ರೀ.ತಿಮ್ಮರಾಯಪ್ಪ ಬಿನ್‌  ಚಿಕ್ಕಮುನಿಯಪ್ಪ, ಬಲಮಂದೆ ಗ್ರಾಮದವರು ನೀಡಿದ ದೂರಿನಲ್ಲಿ   ದಿನಾಂಕ 07-09-2015 ರಂದು ಸಂಜೆ ಸುಮಾರು 04-00 ಗಂಟೆಯಲ್ಲಿ ಫಿರ್ಯಾಧಿದಾರರ ಮಗಳನ್ನು (ಹೆಸರು ಬದಲಿಸಿದೆ), 17 ವರ್ಷ, ಎಂಬಾಕೆಯನ್ನು ಆರೋಪಿಯಾದ ಶ್ರೀನಿವಾಸ @ ಸೀನಪ್ಪ ಬಿನ್ ಮುನಿಯಪ್ಪ ನಾಗನಹಳ್ಳಿ ಗ್ರಾಮ ಎಂಬಾತನು ಒಂದು ದ್ವಿಚಕ್ರ ವಾಹನದಲ್ಲಿ ಬಲವಂತವಾಗಿ ಅಹಹರಿಸಿಕೊಂಡು ಹೋಗಿರುತ್ತಾನೆ.

-ಮಹಿಳೆ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣ : 01

-ಮನುಷ್ಯ ನಾಪತ್ತೆ : ಇಲ್ಲ,

-ಜೂಜಾಟ ಕಾಯ್ದೆ : ಇಲ್ಲ, -ಅಪಘಾತಗಳು :ಇಲ್ಲ

-ಭದ್ರತಾ ಕಾಯ್ದೆ : ಇಲ್ಲ,

-ಇತರೆ ಪ್ರಕರಣಗಳು:- ಇಲ್ಲ

-ಅಸ್ವಾಭಾವಿಕ ಮರಣ: ಇಲ್ಲ,

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು : ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ 08153-274743 ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ