ದಿನದ ಅಪರಾಧಗಳ ಪಕ್ಷಿನೋಟ ೨೮ನೇ ಜನವರಿ ೨೦೧೨

ಕೆ.ಜಿ.ಎಫ್ ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ: ೨೮.೦೧.೨೦೧೨ ರ ೦೭.೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.

-ಕೊಲೆ: ಇಲ್ಲ

-ಡಕಾಯತಿ: ಇಲ್ಲ

-ಸುಲಿಗೆ: ಇಲ್ಲ

-ಮನೆಕಳ್ಳತನ: ಇಲ್ಲ

-ಕಳ್ಳತನ: ಇಲ್ಲ

- ರಸ್ತೆ ಅಪಘಾತಗಳು: ೦೨

  • ಬೆಮೆಲ್‌ನಗರ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಘಟನೆ ಬೆಮೆಲ್‌ ಎಸ್ಟೇಟ್‌ ಆಫೀಸ್‌ ಬಳಿ ಸಂಭವಿಸಿರುತ್ತದೆ. ದಿನಾಂಕ:27-01-2012 ರಂದು ಸಂಜೆ 6-00 ಗಂಟೆಯಲ್ಲಿ ಬೆಮಲ್ ನ ಎಸ್ಟೇಟ್ ಆಫೀಸ್ ಮುಂಭಾಗದಲ್ಲಿರುವ ಪುಟ್ಬಾಲ್ ಮೈಧಾನದಲ್ಲಿ ವಾಕಿಂಗ್ ಮಾಡುತ್ತಿರುವಾಗ, ಒಂದು ಬೂದಿ ಬಣ್ಣದ ಮಾರುತಿ ವ್ಯಾನ್ ಸಂಖ್ಯೆ: KA-04-MA-4394 ಅನ್ನು ಅದರ ಚಾಲಕ ಶ್ರೀ ನಾರಾಯಣಮೂರ್ತಿ ಎಂಬುವವರು ಶ್ರೀನಿವಾಸನ್ ಎಂಬುವವರನ್ನು ಪಕ್ಕದ ಸೀಟಿನಲ್ಲಿ ಕುಳ್ಳರಿಸಿಕೊಂಡು ಮೈದಾನದ ದಕ್ಷಿಣ ದಿಕ್ಕಿನಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎದುರಿಗಿದ್ದ ಕಾಲುವೆಯಲ್ಲಿ ವಾಹನವನ್ನು ನುಗ್ಗಿಸಿದ್ದರಿಂದ ವಾಹನ ಚಾಲಕ ನಾರಾಯಣಮೂರ್ತಿ ಮತ್ತು ಶ್ರೀನಿವಾಸನ್ ಎಂಬುವವರಿಗೆ ಗಾಯಗಳಾಗಿದ್ದು ಪಿರ್ಯಾಧಿದಾರರು ಗಾಯಾಳುಗಳನ್ನು ಬೆಮಲ್ ಮೆಡಿಕಲ್ ಸೆಂಟರ್ ಗೆ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.
  • ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಕನಾಂಕ 27-01-2012 ರಂದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ಪಿರ್ಯಾಧಿ ಶ್ರೀ ಸುಧಾಕರರೆಡ್ಡಿ ಬಿನ್ ವೆಂಕಟರಾಮರೆಡ್ಡಿ, ವಯಸ್ಸು ೨೭ ವರ್ಷ, ವಾಸ: ಪರವನಹಳ್ಳಿ ಗ್ರಾಮ, ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು ರವರ ತಮ್ಮ ಶ್ರೀ ಮುನಿರಾಜು ಮತ್ತು ಕ್ಲೀನರ್ ಮಂಜು ರವರು ಮೂಗನಹಳ್ಳಿ ಯಿಂದ ಹಾಲಿನ ಕ್ಯಾನ್ ಗಳನ್ನು TATA ACE NO. KA- 08-3851 ವಾಹನದಲ್ಲಿ ತುಂಬಿಕೊಂಡು ಆನ್ಲೋಡ್ ಮಾಡಲು ಕೆ.ಜಿ.ಎಫ್. ಗೆ ಹೋಗಲು ಪುತ್ರಸೊಣ್ಣೇನಹಳ್ಳಿ ಮತ್ತು ಪರವನಹಳ್ಳಿ ಮಧ್ಯೆ ಹೋಗುತ್ತಿದ್ದಾಗ ನೀಲಗಿರಿ ಪೋಲ್ ಗಳನ್ನು ತುಂಬಿದ್ದ ಟ್ರಾಕ್ಟರ್ ನಂ. KA-08-T-858 ವಾಹನದ ಚಾಲಕ ಸಹ TATA ACE NO. KA 08-3851 ವಾಹನದ ಹಿಂದೆಯೇ ಬರುತ್ತಿದ್ದು, TATA ACE ಚಾಲಕನ ಎದುರು ಬಂದ ವಾಹನಕ್ಕೆ ಸೈಡ್ ಕೊಡಲು ಸ್ವಲ್ಪ ಎಡಕ್ಕೆ ಹೋದಾಗ ಹಿಂದಗಡೆಯಿಂದ ಟ್ರಾಕ್ಟರ್ ಚಾಲಕ (ಹೆಸರು, ವಿಳಾಸ ಗೊತ್ತಿಲ್ಲ) ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಎಡಗಡೆಯಿಂದಲೇ ಮುನ್ನುಗ್ಗಿ ನೀಲಗಿರಿ ಪೋಲ್ ಗಳಿಂದ ಡಿಕ್ಕಿ ಹೊಡೆದ ಪರಿಣಾಮ TATA ACE ವಾಹನದ ಮುಂದಿನ ಗಾಜು ಪುಡಿಪುಡಿಯಾಗಿ, ಎಡ ಬಾಗಿಲು ಜಾಮಾಗಿ ಕ್ಲೀನರ್ ನ ಎಡ ಕಣ್ಣಿಗೆ ರಕ್ತ ಗಾಯವಾಗಿರುತ್ತೆ ಮತ್ತು ಪಿರ್ಯಾಧಿದಾರರ ತಮ್ಮ ಮುನಿರಾಜುವಿಗೆ ಮೈ ಕೈ ನೋವುಂಟಾಗಿರುತ್ತದೆ. ಆರೋಪಿ ಚಾಲಕ ಟ್ರಾಕ್ಟರ್  ಅನ್ನು ಸ್ಥಳದಲ್ಲಿ ನಿಲ್ಲಿಸದೇ ಟ್ರಾಕ್ಟರ್ ನೊಂದಿಗೆ ಪರಾರಿಯಾಗಿರುತ್ತಾನೆ.

-ಹಲ್ಲೆ ಪ್ರಕರಣ: ಇಲ್ಲ

-ಮೋಸ / ವಂಚನೆ: ಇಲ್ಲ    

-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ

-ಮನುಷ್ಯ ನಾಪತ್ತೆ: ಇಲ್ಲ

-ಇತರೆ ಪ್ರಕರಣಗಳು: ಇಲ್ಲ

-ಅಸ್ವಾಭಾವಿಕ ಮರಣ: ೦೧

  • ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀಮತಿ ಗೀತಾ, ದೇಶಿಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಇದ್ದು, ಸದರಿ ವಿಚಾರ ಮನೆಯವರಿಗೆ ಗೊತ್ತಾದರೆ ಬೈಯ್ಯುತ್ತಾರೆಂದು ದಿನಾಂಕ:12-12-2012 ರಂದು ರಾತ್ರಿ 10-00 ಗಂಟೆಯಲ್ಲಿ ದೇಶಿಹಳ್ಳಿಯ ಅವರ ಮನೆಯಲ್ಲಿ ಮೈ ಮೇಲೆ ಸೀಮೆ ಎಣ್ನೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದವಳು, ಗುಣವಾಗದೆ ದಿನಾಂಕ.16-12-2011 ರಂದು ಬೆಳಿಗ್ಗೆ 7-10 ಗಂಟೆಯಲ್ಲಿ ಮೃತಪಟ್ಟಿರುತ್ತಾಳೆ.

-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

This entry was posted in ಅಪರಾಧ. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s