ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: ೨೭.೦೧.೨೦೧೨ ರ ೦೭.೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತದೆ.
-ಕೊಲೆ: ಇಲ್ಲ
-ಡಕಾಯತಿ: ಇಲ್ಲ
-ಸುಲಿಗೆ: ಇಲ್ಲ
-ಮನೆಕಳ್ಳತನ: ಇಲ್ಲ
-ಕಳ್ಳತನ: ಇಲ್ಲ
- ರಸ್ತೆ ಅಪಘಾತಗಳು: ೦೧
-
ಬೆಮೆಲ್‌ನಗರ ಪೊಲೀಸ್ ಠಾಣೆಯಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:26-01-2012 ರಂದು ಬೆಳಿಗ್ಗೆ 7:30 ಗಂಟೆ ಸಮಯದಲ್ಲಿ ಪಿರ್ಯಾಧಿ ಶ್ರೀ ಗಂಗಪ್ಪ ಬಿನ್ ಲೇಟ್ ಮುನಿಸ್ವಾಮಪ್ಪ, ವಯಸ್ಸು ೬೦, ವಾಸ: ದಾಸರಹೊಸಹಳ್ಳಿ ಗ್ರಾಮ, ಬೆಮೆಲ್‌ನಗರ, ಕೆ.ಜಿ.ಎಫ್. ರವರು ದಾಸರಹೊಸಹಳ್ಳಿ ವಾಸಿ ಶ್ರೀ ರಾಮಚಂದ್ರಯ್ಯ ರವರ ಸೀಮೆ ಹಸುವನ್ನು ನೇರಳೆಕೆರೆ ಡೈರಿಯ ಬಳಿಗೆ ಹೋಗಲು ಕೆ.ಜಿ.ಎಫ್.- ಬಂಗಾರಪೇಟೆ ಮುಖ್ಯರಸ್ತೆಯ ಲ್ಯಾಂಡ್ ಮಾರ್ಕ್ ಹೋಟೆಲ್ ಬಳಿ ರಸ್ತೆ ಎಡಬದಿಯಲ್ಲಿ ಹೊಡೆದುಕೊಂಡು ಹೋಗುತ್ತಿದ್ದಾಗ ಕೆ.ಜಿ.ಎಫ್. ಕಡೆಯಿಂದ ಬಂದ ಕೆಎ-07-8504 ನಂಬರಿನ ಎಸ್.ಎಸ್.ಎನ್. ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೀಮೆ ಹಸುವಿಗೆ ಡಿಕ್ಕಹೊಡೆದ ಪರಿಣಾಮ ಸೀಮೆ ಹಸುವಿನ ತಲೆಗೆ ರಕ್ತಗಾಯಗಳಾಗಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ.ಸದರಿ ಸೀಮೆ ಹಸುವಿನ ಬಲೆ ಸುಮಾರು ರೂ. 40.000/- ಗಳಾಗಿರುತ್ತದೆ.
-ಹಲ್ಲೆ ಪ್ರಕರಣ: ೦೩
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:26-01-2012 ರಂದು ಮಧ್ಯಾಹ್ನ14-00 ಗಂಟೆಯಲ್ಲಿ ಪಿರ್ಯಾಧಿ ಶ್ರೀಮತಿ ನಾಗರತ್ನಮ್ಮ ಕೋಂ ಲೇಟ್ ಪಾಪಿರೆಡ್ಡಿ, ವಯಸ್ಸು ೪೦ ವರ್ಷ, ವಾಸ: ಗರುಡಾದ್ರಿಹಳ್ಳಿ, ಬಂಗಾರಪೇಟೆ ತಾಲ್ಲೂಕು ರವರು ಮತ್ತು ಅವರ ಮಗ ಮನೆಯಲ್ಲಿರುವಾಗ ಅದೇ ಗ್ರಾಮದ ವಾಸಿ ಆರೋಪಿ ಕೃಷ್ಣಮೂರ್ತಿ ಬಿನ್ ಮುನಿಯಪ್ಪ ರವರು ಪಿರ್ಯಾಧಿದಾರರ ಮನೆಯ ಮೇಲೆ ಏರಿ ಕೋಲಿನಿಂದ ಕಿಟಕಿಯ ಗ್ಲಾಸುಗಳನ್ನು ಹೊಡೆಯುತ್ತಿದ್ದಾಗ ಪಿರ್ಯಾಧಿಯ ಮಗ ಪ್ರವೀಣ್‌ರವರು ಹೋಗಿ “ಏಕೆ ಈ ರೀತಿ ಕಿಟಕಿಗಳನ್ನು ಹೊಡೆಯುತ್ತಿಯಾ ಗ್ಲಾಸುಗಳು ಹೊಡೆದು ಹೋಗುವುದಿಲ್ಲವೇ” ಎಂದು ಕೇಳಿದ್ದಕ್ಕೆ ಆತನೊಂದಿಗೆ ಗಲಾಟೆ ಮಾಡಿ ಕೈಗಳಿಂದ ಹೊಡೆಯುತ್ತಿದ್ದು ಅದನ್ನು ಕಂಡು ಪಿರ್ಯಾಧಿಯು ಅಡ್ಡ ಹೋಗಿದ್ದಕ್ಕೆ “ಏ ಮುಂಡೆ ನೀನು ನನಗೆ ಅಡ್ಡ ಬರುತ್ತೀಯಾ” ಎಂದು ಹೇಳಿ ಒಂದು ಕೋಲಿನಿಂದ ಪಿರ್ಯಾಧಿಯ ಮೈಮೇಲೆ, ಹೊಡೆದು, ನಂತರ ಅಲ್ಲೇ ಇದ್ದ ಕಲ್ಲನ್ನು ತೆಗೆದು ಪಿರ್ಯಾಧಿಯ ಹಣೆಯ ಮೇಲೆ ಮತ್ತು ಎಡಕೈ ಮೊಣಕೈ ಮೇಲೆ ಹೊಡೆದು ರಕ್ತಗಾಯಪಡಿಸಿ ಅದೇ ಕಲ್ಲನ್ನು ತೋರಿಸಿ ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ಈ ಕೃತ್ಯ ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದು ಗರುಡಾದ್ರಿಹಳ್ಳಿ ಗ್ರಾಮದಲ್ಲಿ ನಡೆದಿರುತ್ತೆ.
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26-01-2012 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಆರೋಪಿಗಳಾದ ೧)ಮುನಿವೆಂಕಟರೆಡ್ಡಿ, ೨)ರಾಮರೆಡ್ಡಿ, ೩)ಗಂಗಿರೆಡ್ಡಿ ಮತ್ತು ವೆಂಕಟಮುನಿರೆಡ್ಡಿ, ಎಲ್ಲರೂ ವಾಸ: ಜೆ.ಕೆ.ಪುರಂ, ಬಂಗಾರಪೇಟೆ ತಾಲ್ಲೂಕು ರವರುಗಳು ಪಿರ್ಯಾಧಿ ಶ್ರೀ ಟಿ.ವೆಂಕಟೇಶ್ ಬಿನ್ ತಿಮ್ಮರಾಯರೆಡ್ಡಿ, ವಯಸ್ಸು ೪೮ ವರ್ಷ, ವಾಸ: ನೆರಲೂರು ಗ್ರಾಮ, ಆಣೇಕಲ್ಲು ತಾಲ್ಲೂಕು, ಬೆಂಗಳೂರು ಜಿಲ್ಲೆ ರವರ ಜೆ.ಕೆ ಪುರಂ ಸರ್ವೆ ನಂಬರ್ 11, 12/2, 13/2, 21/1, 2 ರಲ್ಲಿನ ಜಮೀನಿನೊಳಗೆ ಉದ್ದೇಶಪೂರ್ವಕವಾಗಿ ಆಕ್ರಮ ಪ್ರವೇಶ ಮಾಡಿ ಜಮೀನಿನ ಗೆನೆಮೆಯಲ್ಲಿರುವ ಬೇಲಿಯನ್ನು ಕಿತ್ತು ಹಾಕಿ ಜಮೀನನ್ನು ಒತ್ತುವರಿ ಮಾಡಿ ಉಳುಮೆ ಮಾಡುತ್ತಿದ್ದು ಇದನ್ನು ಪಿರ್ಯಾಧಿದಾರರು ಕಂಡು “ಏಕೆ ಈ ರೀತಿ ಉಳುಮೆ ಮಾಡುತ್ತೀರಿ” ಎಂದು ಕೇಳಿದ್ದಕ್ಕೆ ಆರೋಪಿಗಳು ಪಿರ್ಯಾಧಿಯೊಂದಿಗೆ ಗಲಾಟೆ ಮಾಡಿ ಈ ಜಮೀನು “ನಿಮ್ಮಪ್ಪನದಾ” ಎಂತ ಬೈದು ನೀನೇನಾದರೂ ಈ ಜಮೀನಿನೊಳಗೆ ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ ಮತ್ತು ಆರೋಪಿಗಳು ತೋಟದಲ್ಲಿದ್ದ ಬೂರಗಮರ, ಟೀಕ್ ಮರಗಳು ಮತ್ತು ಇತರೆ ಮರಗಳನ್ನು ಕತ್ತರಿಸಿ ತಳ್ಳಿ ಹಾಗೂ ಬೂರಗಮರಕ್ಕೆ ಮತ್ತು ಇತರೆ ಮರಗಳಿಗೆ ಬೆಂಕಿ ಇಟ್ಟು ನಾಶ ಪಡಿಸಿ ಸುಮಾರು ರೂ. 50,000-00 ಗಳಷ್ಟು ನಷ್ಠ ಉಂಟುಮಾಡಿದ್ದು ಹಾಗೂ ಪಿರ್ಯಾದಿಗೆ ಮಚ್ಚನ್ನು ತೋರಿಸಿ ನೀನೇನಾದರೂ ಮಾತನಾಡಿದರೆ ಇಲ್ಲಿಯೇ ಕತ್ತರಿಸಿ ಸಾಯಿಸಿ ಬಿಡುತ್ತೇನೆಂತ ಪ್ರಾಣ ಬೆದರಿಕೆ ಹಾಕಿರುತ್ತಾನೆ.
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26-01-2012 ರಂದು ಮಧ್ಯಾಹ್ನ ಸುಮಾರು 1-15 ಗಂಟೆಯ ಸಮಯದಲ್ಲಿ ಸತೀಶ್ ಬಿನ್ ನಾಗರಾಜ್, ಸಂಜಯ್‌ಗಾಂಧಿನಗರ ವಾಸಿ ರವರು ಸಂಜಯ್ ಗಾಂದಿನಗರದ ವಲ್ಸಾ ಎಂಬುವರ ಚಿಲ್ಲರೆ ಅಂಗಡಿ ಬಳಿ ನಿಂತಿದ್ದಾಗ ಆರೋಪಿ ಅಕಾಸ್ ಉರುಫ್ ಗೂಳಿ ಬಿನ್ ಕುಟ್ಟಿ ಉರುಫ್ ಮುನಿಸ್ವಾಮಿ ಎಂಬುವನು ಉದ್ದೇಶ ಪೂರ್ವಕವಾಗಿ ಫಿರ್ಯಾದಿಯನ್ನು ದುರ್ಭಾಷೆಗಳಿಂದ ಬೈದು ಕೈನಿಂದ ತಳ್ಳಿದಾಗ ಫಿರ್ಯಾದಿಯು ಕೇಳಿದ್ದಕ್ಕೆ ಆರೋಪಿ ಅವನ ಜೋಬಿನಲ್ಲಿದ್ದ ಒಂದು ರೇಜರ್ ನ್ನು ತೆಗೆದುಕೊಂಡು ಫಿರ್ಯಾದಿಯ ಬಲ ಗೈ ಮಧ್ಯ ಬೆರಳಿಗೆ ಮತ್ತು ಎಡ ಕಿವಿಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯಗಳನ್ನುಂಟು ಮಾಡಿ ಅದೇ ರೇಜರನ್ನು ತೋರಿಸಿ ಇದರಿಂದಲೇ ಹೊಡೆದು ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ.
-ಮೋಸ / ವಂಚನೆ: ಇಲ್ಲ
-ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು: ಇಲ್ಲ
-ಮನುಷ್ಯ ನಾಪತ್ತೆ: ಇಲ್ಲ
-ಇತರೆ ಪ್ರಕರಣಗಳು: ೦೧
-
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾಧಿ ಶ್ರೀ ಮುನಿವೆಂಕಟರೆಡ್ಡಿ ಬಿನ್ ಲೇಟ್ ಗಂಗಿರೆಡ್ಡಿ, ವಾಸ: ಜೆ.ಕೆ.ಪುರಂ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ಆರೋಪಿಗಳಾದ ೧)ವೆಂಕಟರೆಡ್ಡಿ ವಾಸ: ಬೆಂಗಳೂರು, ೨) ಪಾಪಿರೆಡ್ಡಿ, ವಾಸ: ಜೆ.ಕೆ.ಪುರಂ, ೩) ಸುಧಾಕರ ಮತ್ತು ಇತರೆಯರಿಗೆ ಜಮೀನುಗಳ ವಿಚಾರದಲ್ಲಿ ವ್ಯವಹಾರಗಳು ಇದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ಕೇಸುಗಳು ನಡೆಯುತ್ತಿದ್ದರೂ ಸಹ ದಿನಾಂಕ 26-01-2012 ರಂದು ಮಧ್ಯಾಹ್ನ 1-00 ಗಂಟೆಯಲ್ಲಿ ಆರೋಪಿಗಳು ಮತ್ತು ಇತರರು ಮಾವಿನ ಗಿಡಗಳನ್ನು ಕಡಿಯುತ್ತಿದ್ದು ಆಗ ಪಿರ್ಯಾಧಿದಾರರು ನಿಂತು ನೋಡುತ್ತಿದ್ದಾಗ ಸದರಿ ಆರೋಪಿಗಳು ಮಚ್ಚು ತೆಗೆದುಕೊಂಡು ಉದ್ದೆಶಪೂರ್ವಕವಾಗಿ ಪಿರ್ಯಾಧಿದಾರರ ಬಳಿ ಬಂದು ನೀವು ಜಮೀನು ಖಾಲಿ ಮಾಡಬೇಕು ಇಲ್ಲವಾದರೆ ನಿಮಗೆ ಸಾಯಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಘಟನೆ ಜೆ.ಕೆ.ಪುರಂ, ಬಂಗಾರಪೇಟೆ ತಾಲ್ಲೂಕು ಇಲ್ಲಿ ನಡೆದಿರುತ್ತದೆ.
-ಅಸ್ವಾಭಾವಿಕ ಮರಣ: ಇಲ್ಲ
-ಭದ್ರತಾ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
-ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.



